ಎಂತೆಂತಹ ಪ್ರಶ್ನೆಗಳನಿಟ್ಟೆ
ಎಂತೆಂತಹ ಪೋಷಾಕು ತೊಟ್ಟೆ
ಉದ್ದಗಲಕ್ಕೂ ಮಿತಿಗಳನೆ ಇಟ್ಟು
ಮಿತಿಮೀರಲೊಮ್ಮೊಮ್ಮೆ , ಅನುಭವಿಸು ಎಂದು ಮೌನವಾಗಿಬಿಟ್ಟೆ...!
ಓ ಬದುಕೆ!!! ನೀ ಮೌನವಾಗಿಯೆ ಉಳಿದುಬಿಟ್ಟೆ...!
ಏನೇನೆಲ್ಲ ಗಳಿಸಿಕೊಟ್ಟೆ
ಏನೇನೆಲ್ಲ ಕಳೆದುಬಿಟ್ಟೆ
ಏನೇನೆಲ್ಲ ಕಲಿಸಿ, ಏನೇನೆಲ್ಲ ಮರೆಸಿ
ಸುಖ ದುಃಖ ನಿನ್ನದು ಎಂದು ಮೌನವಾಗಿಬಿಟ್ಟೆ...!
ಓ ಬದುಕೆ!!! ನೀ ಮೌನವಾಗಿಯೆ ಉಳಿದುಬಿಟ್ಟೆ...!
ಎಷ್ಟು ದಾರಿಗಳ ತೋರಿಸಿಕೊಟ್ಟೆ
ಒಂದೇ ದಾರಿಯಲಿ ನಡೆಸಿಬಿಟ್ಟೆ
ಅಲ್ಲೂ ಹಲವು ತಿರುವುಗಳನಿಟ್ಟು
ಆಯ್ಕೆ ನಿನ್ನದು ಎಂದು ಮೌನವಾಗಿಬಿಟ್ಟೆ...!
ಓ ಬದುಕೆ!!! ನೀ ಮೌನವಾಗಿಯೆ ಉಳಿದುಬಿಟ್ಟೆ...!
3 comments:
super guru
super guru
Lovely lines and true lines..!
Post a Comment