Thursday, July 31, 2008

ಕಾಣಿಕೆಯನ್ನೀಯುವುದೆಂತು...!

ಬೇಡ ಬೇಡ ಎಂದರು ಭೂಮಿಗೆ ಬಂದೆನ್ ,
ಇರುವುದೆಂತು ಕೆಲ ಗಳಿಗೆಯೆಂದು ಅರಿತೇನ್ ,
ಈ ಭೂಮಿಗೆ ಎನ್ನ ಕಾಣಿಕೆಯನ್ನೀಯಲ್ ಪರಿತಪಿಸಿದೆನ್ ,
ಕಾಣಿಕೆಯನ್ನೀಯುವುದೆಂತು...!
ಒಂದು ಸಣ್ಣ ಗುರುತೊಂದನ್ನು ಮೂಡಿಸಲಾಗದೆ ಮಣ್ಣಾದೆನ್...!!

ಕತ್ತಲು ಬೆಳಕಿನ ಆಟದಲಿ...

ಆಸೆಗಾಗಿ ಆಸರೆ ಕಳೆದುಕೊಂಡವರೆಷ್ಟೋ...
ಆಸರೆಗಾಗಿ ಆಸೆ ಕಳೆದುಕೊಂಡವರೆಷ್ಟೋ...
ಪ್ರೀತಿಗಾಗಿ ಮೋಸ ಮಾಡಿದವರೆಷ್ಟೋ...
ಪ್ರೀತಿಸಿ ಮೋಸ ಮಾಡಿದವರೆಷ್ಟೋ...
ಈ ಕತ್ತಲು ಬೆಳಕಿನ ಆಟದಲಿ
ತಮ್ಮನ್ನು ತಾವು ಕಳೆದುಕೊಂಡವರೆಷ್ಟೋ.....!

ನಗುತಿದೆ ಶವವೊಂದು...

ಅಳುವಿರೇಕೆ ಮಂಕೆ!!! ಹೋಗುವೆ ನಾ ಎಲ್ಲಿಗೆ?
ಕಾಲ ನಿಯಮವದು, ಒಬ್ಬರ ಜಾಗಕ್ಕೆ ಇನ್ನೊಬ್ಬರು ಇಲ್ಲಿಗೆ
ನಡೆಯಲಿ ಈ ದೇಹ ಮೆರವಣಿಗೆ ಬಂದ ದಾರಿಯೆಡೆಗೆ....

Wednesday, July 30, 2008

ಒಬ್ಬೊಬ್ಬನೆ ಕುಳಿತಿರಲು...

ಒಬ್ಬೊಬ್ಬನೆ ಕುಳಿತಿರಲು
ಕಾಡುತಿಹವು ನೆನಪುಗಳು...
ತಡೆತಡೆದು ತಡೆದರು
ಕದಡಿಹವು ಭಾವಗಳು...
ಕೇಳುತಿಹವು ನಿನ್ನ... ಎಲ್ಲಿರುವೆ ಬಾ ಬಾರೆ!!!