Friday, September 19, 2008

ಇದ್ದುದ ಬಿಟ್ಟಿರಲು!!!

ಇದ್ದುದು ನನ್ನದಲ್ಲವೆಂದು
ಇದ್ದುದ ಬಿಟ್ಟು ಇಲ್ಲದುದರೆಡೆಗೆ ನಡೆದಿರಲು
ಸೋಲೆಂಬ ಗೆಲುವು ಅಣಕಿಸಿ ನಕ್ಕಿತು
" ಇದ್ದುದೇ ನಿನ್ನದಲ್ಲವೆಂದ ಮೇಲೆ
ಇಲ್ಲದ್ದು ನಿನ್ನದೇಗಾದೀತು " !!!

ನೆನೆದು ನೆನೆದು ನಿನ್ನ....!

ನೆನೆದು ನೆನೆದು ನಿನ್ನ
ಮನವು ತಣಿಯಲೆನ್ನ
ನಿಂತ ನಿಲುವಿನಲ್ಲೇ ಕಣ್ಣಲ್ಲೆ ಕಡೆದೆ ನಿನ್ನ
ಯಾಕೋ ಏನೋ ಒಂಥರಾ ಭಾವ ಕದಡಿದಂತೆ
ಕಳೆದು ಹೋದೆ ನಾನು ಪರಿವೆ ಇಲ್ಲದಂತೆ.......!