ಸಾಯುವ ಮುನ್ನ ಎನ್ನ ಕನಸುಗಳೇ ಕೇಳಿರಿ ಕಾಯುತಿರಿ ಎನ್ನ ಮತ್ತೆ ಬರುವೆ ನಿಮ್ಮನಪ್ಪಲು...! ನೂರ್ ದೇಹ ಬಿಟ್ ನೂರ್ ದೇಹ ಸೇರಿದರು ನಿಮ್ಮನ್ ಅಪ್ಪಿಯೇ ಅಪ್ಪುವೆನ್ ಕಾಯುತಿರಿ ಎನ್ನ ಮತ್ತೆ ಬರುವೆ ನಿಮ್ಮನಪ್ಪಲು...!
ಸಾಯುವ ಮುನ್ನ ಕಂಡ ಕನಸುಗಳ ಕೈ ಚೆಲ್ಲುತಿಹೆನು ರಕ್ಷಿಸು ಪ್ರಕೃತಿಯೆ ಮತ್ತೆ ಬರುವೆನು ಅವ ಪಡೆಯಲು ನೀ ಮರುಜನ್ಮದ ಅನುಮತಿಯಿತ್ತರೆ!!!
ಎಂತೆಂತಹ ಪ್ರಶ್ನೆಗಳನಿಟ್ಟೆ ಎಂತೆಂತಹ ಪೋಷಾಕು ತೊಟ್ಟೆ ಉದ್ದಗಲಕ್ಕೂ ಮಿತಿಗಳನೆ ಇಟ್ಟು ಮಿತಿಮೀರಲೊಮ್ಮೊಮ್ಮೆ , ಅನುಭವಿಸು ಎಂದು ಮೌನವಾಗಿಬಿಟ್ಟೆ...! ಓ ಬದುಕೆ!!! ನೀ ಮೌನವಾಗಿಯೆ ಉಳಿದುಬಿಟ್ಟೆ...!
ಏನೇನೆಲ್ಲ ಗಳಿಸಿಕೊಟ್ಟೆ ಏನೇನೆಲ್ಲ ಕಳೆದುಬಿಟ್ಟೆ ಏನೇನೆಲ್ಲ ಕಲಿಸಿ, ಏನೇನೆಲ್ಲ ಮರೆಸಿ ಸುಖ ದುಃಖ ನಿನ್ನದು ಎಂದು ಮೌನವಾಗಿಬಿಟ್ಟೆ...! ಓ ಬದುಕೆ!!! ನೀ ಮೌನವಾಗಿಯೆ ಉಳಿದುಬಿಟ್ಟೆ...!
ಎಷ್ಟು ದಾರಿಗಳ ತೋರಿಸಿಕೊಟ್ಟೆ ಒಂದೇ ದಾರಿಯಲಿ ನಡೆಸಿಬಿಟ್ಟೆ ಅಲ್ಲೂ ಹಲವು ತಿರುವುಗಳನಿಟ್ಟು ಆಯ್ಕೆ ನಿನ್ನದು ಎಂದು ಮೌನವಾಗಿಬಿಟ್ಟೆ...! ಓ ಬದುಕೆ!!! ನೀ ಮೌನವಾಗಿಯೆ ಉಳಿದುಬಿಟ್ಟೆ...!
ಬೇಡ ಬೇಡ ಎಂದರು ಭೂಮಿಗೆ ಬಂದೆನ್ , ಇರುವುದೆಂತು ಕೆಲ ಗಳಿಗೆಯೆಂದು ಅರಿತೇನ್ , ಈ ಭೂಮಿಗೆ ಎನ್ನ ಕಾಣಿಕೆಯನ್ನೀಯಲ್ ಪರಿತಪಿಸಿದೆನ್ , ಕಾಣಿಕೆಯನ್ನೀಯುವುದೆಂತು...! ಒಂದು ಸಣ್ಣ ಗುರುತೊಂದನ್ನು ಮೂಡಿಸಲಾಗದೆ ಮಣ್ಣಾದೆನ್...!!
ಆಸೆಗಾಗಿ ಆಸರೆ ಕಳೆದುಕೊಂಡವರೆಷ್ಟೋ... ಆಸರೆಗಾಗಿ ಆಸೆ ಕಳೆದುಕೊಂಡವರೆಷ್ಟೋ... ಪ್ರೀತಿಗಾಗಿ ಮೋಸ ಮಾಡಿದವರೆಷ್ಟೋ... ಪ್ರೀತಿಸಿ ಮೋಸ ಮಾಡಿದವರೆಷ್ಟೋ... ಈ ಕತ್ತಲು ಬೆಳಕಿನ ಆಟದಲಿ ತಮ್ಮನ್ನು ತಾವು ಕಳೆದುಕೊಂಡವರೆಷ್ಟೋ.....!